ಗಗನವೇ ಬಾಗಿ
ಸಂಜು ವೆಡ್ಸ್ ಗೀತಾಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಪ್ರೀತಿಗೆ
ಯಾರು ಬಂದಿರದ ಮನದಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ || ಪ ||
ಜೀವನ ಈ ಕ್ಷಣ ಶುರುವಾದಂತಿದೆ
ಕನಸಿನ ಊರಿನ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ
ಖುಷಿ ಈಗ ಮೇರೆ ಮೀರಿ
ಮಧುಮಾಸದಂತೆ ಕೈ ಚಾಚಿದೆ
ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೆ ಆಮಂತ್ರಣ || ೧ ||
ಸಾವಿನ ಅಂಚಿನ ಬದುಕಂತಾದೆ ನೀ
ಸಾವಿರ ಸೂರ್ಯರ ಬೆಳಕಾದಂತೆ ನೀ
ಕೊನೆಯಾಸೆಯೊಂದೆ ಈ ಜೀವಕೆ
ನಿನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೆ
ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೆ ಆಮಂತ್ರಣ || ೨ ||
ಸಂಜು ವೆಡ್ಸ್ ಗೀತಾ
ಚಿತ್ರ ನೋಡಿ